ಕೆಲಸದ ಬೇಡಿಕೆ ಸಲ್ಲಿಸಲು/ ಯೋಜನೆಯ ಕುರಿತು ಸಮಸ್ಯೆಗಳಿದ್ದಲ್ಲಿ ಕರೆ ಮಾಡಿ -
8277506000

ನಿಮಗೆ ಒದಗಿಸಬೇಕಾದ / ಒದಗಿಸಲಾದ ಕರ್ನಾಟಕ ಸರ್ಕಾರದ ಸೇವೆ / ಯೋಜನೆಯ ಬಗ್ಗೆ ಕುಂದುಕೊರತೆ ಏನಾದರು ಇದ್ದಲ್ಲಿ ಇಲ್ಲಿ ನೋಂದಾಯಿಸಿ Grievance / 1902 ಗೆ ಕರೆ ಮಾಡಿ.

ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯ ಪರಿಣಾಮಕಾರಿ ಅನುಷ್ಟಾನದ ಉದ್ದೇಶದಿಂದ ದಿನಾಂಕ 2-4-2008 ರಂದು ನರೇಗಾ ನಿರ್ದೇಶನಾಲಯವನ್ನು ಸ್ಥಾಪಿಸಲಾಯಿತು. ಯೋಜನೆಯ 2013ರ ಕಾರ್ಯಾಚರಣೆ ಮಾರ್ಗಸೂಚಿಗಳಿಗೆ ಅನುಗುಣವಾಗಿ ಯೋಜನೆಯ ಅನುಷ್ಟಾನದ ಮೇಲ್ವಿಚಾರಣೆಗಾಗಿ ದಿನಾಂಕ 6-8-2013ರಂದು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯವನ್ನು ಸೃಜನೆ ಮಾಡಲಾಯಿತು. ನಿರ್ದೇಶಕರ ಹುದ್ದೆಯನ್ನು ‘ಆಯುಕ್ತರು ಗ್ರಾಮೀಣಾಭಿವೃದ್ಧಿ’ ಎಂದು ಉನ್ನತೀಕರಿಸಲಾಯಿತು.

ಆಯುಕ್ತಾಲಯವು ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಯ ಜೊತೆಗೆ ಸರ್ಕಾರವು ವಹಿಸಬಹುದಾದ ಇತರೆ ಯೋಜನೆಗಳ ಅನುಷ್ಟಾನದ ಮೇಲ್ವಿಚಾರಣೆಯ ಜವಾಬ್ದಾರಿಯನ್ನು ಹೊಂದಿರುತ್ತದೆ. ಪ್ರಸ್ತುತ ನರೇಗಾ ಯೋಜನೆಯ ಜೊತೆಗೆ, ಶ್ಯಾಮ್ ಪ್ರಸಾದ್ ಮುಖರ್ಜೀ ರೂರ್ಬನ್ ಮಿಷನ್, ಸಂಸದ್ ಆದರ್ಶ ಗ್ರಾಮ ಯೋಜನೆ ಮತ್ತು ಉನ್ನತಿ ಯೋಜನೆಗಳನ್ನು ಆಯುಕ್ತಾಲಯದ ಮೇಲ್ವಿಚಾರಣೆಯಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ.

ಆಯುಕ್ತರು ಗ್ರಾಮೀಣಾಭಿವೃದ್ಧಿರವರು ಆಯುಕ್ತಾಲಯದ ಮುಖ್ಯಸ್ಥರಾಗಿರುತ್ತಾರೆ. ಆಯುಕ್ತರಿಗೆ ನೆರವಾಗಲು ಒಬ್ಬರು ಮುಖ್ಯ ಕಾರ್ಯಾಚರಣೆ ಅಧಿಕಾರಿ, ನಾಲ್ವರು ಜಂಟಿ ನಿರ್ದೇಶಕರು, ಒಬ್ಬರು ಮುಖ್ಯ ಆರ್ಥಿಕ ಸಲಹೆಗಾರರು, ನಾಲ್ವರು ಸಹಾಯಕ ನಿರ್ದೇಶಕರು, ಒಬ್ಬ ಲೆಕ್ಕಾಧಿಕಾರಿ, ಲೆಕ್ಕ ಪರಿಶೋಧನಾಧಿಕಾರಿ ಹಾಗೂ ಇತರ ಸಹಾಯಕ ಸಿಬ್ಬಂದಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ.

 

ನಮ್ಮ ಬಗ್ಗೆ

ಒಗ್ಗೂಡುಸುವಿಕೆ

ಸಾಮಾಜಿಕ ಮಾಧ್ಯಮದಲ್ಲಿ ನಮ್ಮನ್ನು ಅನುಸರಿಸಿ

ಮಾಹಿತಿಗಾಗಿ

×
ABOUT DULT ORGANISATIONAL STRUCTURE PROJECTS