ಅಂಜುಮ್ ಪರ್ವೇಜ್ ರವರ ಸಂದೇಶ

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು 2005 ರಲ್ಲಿ ಕೇಂದ್ರ ಸರ್ಕಾರದ ಒಂದು ಕಾಯ್ದೆಯ ಮೂಲಕ ಜಾರಿಗೆ ಬಂದಿತು. ಈ ಯೋಜನೆಯು ಸ್ವ-ಇಚ್ಛೆಯಿಂದ ಅಕುಶಲ ಕೆಲಸ ಬಯಸುವ ಗ್ರಾಮೀಣ ಕುಟುಂಬಗಳ ವಯಸ್ಕರಿಗೆ ಆರ್ಥಿಕ ವರ್ಷದಲ್ಲಿ ಕನಿಷ್ಠ 100 ದಿನಗಳ‌ ಕೆಲಸ ಒದಗಿಸುವ ಮಹತ್ವದ ಉದ್ದೇಶ ಹೊಂದಿದೆ‌‌. ಇದರ ಜೊತೆಗೆ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿಗೆ ನೆರವಾಗುವ ಸಮುದಾಯ ಆಸ್ತಿಗಳು ಮತ್ತು ಗ್ರಾಮೀಣ ಜನರ ಜೀವನೋಪಾಯ ಬಲಪಡಿಸುವ ವೈಯಕ್ತಿಕ ಆಸ್ತಿಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಯೋಜನೆ ಹೊಂದಿದೆ‌.

ಈ ಯೋಜನೆಯಡಿ ಕೆಲಸ ಪಡೆಯುವುದನ್ನು ಕಾಯ್ದೆಯು ಕೂಲಿಕಾರರಿಗೆ ಹಕ್ಕಿನ ರೂಪದಲ್ಲಿ ಖಾತರಿ ಪಡಿಸಿರುವುದು ಈ ಕಾಯ್ದೆಯ ವೈಶಿಷ್ಟ್ಯವಾಗಿದೆ. ನಿಗದಿತ ಕಾಲಮಿತಿಯೊಳಗೆ ಕೆಲಸ ನೀಡಲು ವಿಫಲವಾದಲ್ಲಿ ನಿರುದ್ಯೋಗ ಭತ್ಯೆ ಮತ್ತು ಕೆಲಸ ಮಾಡಿದ ಕೂಲಿಕಾರರಿಗೆ ಕೂಲಿ ಪಾವತಿಯಲ್ಲಿ ವಿಳಂಬವಾದಲ್ಲಿ ವಿಳಂಬ ಪರಿಹಾರ ಭತ್ಯೆ ಪಾವತಿಸಲು ಕಾಯ್ದೆಯಲ್ಲಿಯೇ ಅವಕಾಶ ಕಲ್ಪಿಸಲಾಗಿದೆ.‌

ಮಹಾತ್ಮ ಗಾಂಧಿ ನರೇಗಾ ಯೋಜನೆಯು ವಿಶ್ವದಲ್ಲಿಯೇ ಅತಿ ದೊಡ್ಡ ಉದ್ಯೋಗ ಸೃಜನೆ ಯೋಜನೆಯಾಗಿದ್ದು, ಯೋಜನೆಯ ಅನುಷ್ಠಾನದಲ್ಲಿ ರಾಜ್ಯವು ವೈವಿಧ್ಯಮಯ ಉಪಕ್ರಮಗಳ ಮೂಲಕ ದೇಶದಲ್ಲಿಯೇ ಮುಂಚೂಣಿಯಲ್ಲಿದೆ..

ಅಂಜುಮ್ ಪರ್ವೇಜ್ ಭಾಆಸೇ

×
ABOUT DULT ORGANISATIONAL STRUCTURE PROJECTS